Index   ವಚನ - 170    Search  
 
ಲಿಂಗವ ಸ್ಥೂಲವೆಂಬರು ಕೆಲವರು, ಲಿಂಗ ಸ್ಥೂಲವಲ್ಲ. ಲಿಂಗವ ಸೂಕ್ಷ್ಮವೆಂಬರು ಕೆಲವರು, ಲಿಂಗ ಸೂಕ್ಷ್ಮವಲ್ಲ. ಸ್ಥೂಲ ಸೂಕ್ಷ್ಮದ ಮೇಲಣ ಜ್ಞಾನ ರೂಪು ಪರಮಾನಂದ ಪರಬ್ರಹ್ಮವೇ ಲಿಂಗವೆಂದರಿದ ಅರಿವು ಅಖಂಡ ರೂಪು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲವು, ತಾನೇ ಬೇರಿಲ್ಲ.