Index   ವಚನ - 181    Search  
 
ಎತ್ತನೇರಿ ನಡೆಸುವ ಅಣ್ಣಗಳಿರ, ಎತ್ತಿನವರೆಡು ಹಿಂಗಾಲು ಮುರಿದು, ಮುಂಗಾಲಲ್ಲಿ ನಡೆಸಬೇಕು. ಕೋಡೆರಡ ಕಿತ್ತುಹಾಕಿ ಬೋಳುಮಾಡಿ, ಹುಲ್ಲು ನೀರಿಲ್ಲದ ಮೇಹ ಹಾಕಿ ಸಲಹಬೇಕು. ಎತ್ತಿನಿಚ್ಚೆಯಲ್ಲಿ ಹೋಗದೆ, ಕಿರುವಟ್ಟೆಯ ಬಿಟ್ಟು, ಹೆಬ್ಬಟ್ಟೆಯಲ್ಲಿ ನಡೆಸಬೇಕು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನತ್ತ, ಅಭಿಮುಖವಾಗಿ ನಡೆಸಬೇಕು ಕೇಳಿರಣ್ಣ.