Index   ವಚನ - 183    Search  
 
ಮೂರುಮುಖದಗ್ನಿಯೆದ್ದು ಮೂರುಲೋಕವ ಸುಡುತ್ತಿರಲು ಅಗ್ನಿಯ ಕೆಡಿಸಬಲ್ಲ ಬಲ್ಲಿದನಾರನು ಕಾಣೆ. ಆ ಅಗ್ನಿಯ ಸ್ತಂಭನವ ಮಾಡಲರಿಯದೆ, ಬಲ್ಲಿದರೆಲ್ಲ ದಳ್ಳುರಿಗೊಳಗಾದರು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ, ಅಕ್ಷರ ಪಂಚಕ ಮಂತ್ರವ ಜಪಿಸಿ, ಅಗ್ನಿಸ್ತಂಭನವ ಮಾಡಿದನು.