Index   ವಚನ - 194    Search  
 
ಆವಾವ ಘಟವ ಧರಿಸಿ ಜೀವಿಸುವ ಜೀವರಿಗೆ, ಬೇರೆ ಬೇರೆ ಅವಕವಕೆ ತಕ್ಕ ವಿಷಯಜ್ಞಾನವ ಕೊಟ್ಟು ಸಲಹುವ ದೇವನ ಮರೆದು, ಹುಲುದೈವವ ಹಿಡಿದು ಹುಲ್ಲಿಂದ ಕಡೆಯಾದರು ಅಕಟಕಟ! ಹೆತ್ತು ಮೊಲೆಯೂಡಿ ಸಲಹುವ ತಾಯ ಮರೆದು, ತೊತ್ತಿನ ಕಾಲಿಗೆ ಬೀಳುವ ವ್ಯರ್ಥಜೀವರ ನೋಡಾ. ನಿತ್ಯ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಕರ್ತನನರಿಯದೆ ಅನ್ಯದೈವವ ಭಜಿಸುವ ಕುನ್ನಿಗಳನೇನೆಂಬೆನು?