Index   ವಚನ - 206    Search  
 
ವೇಷವ ಧರಿಸಿ, ಭಾಷೆಯ ಕಲಿತು, ದೇಶವ ಸುತ್ತಿ ಬಳಲಬೇಡ. ಜಗದೀಶನ ಪಾದವನೊಲಿದು ಪೂಜಿಸಿರಣ್ಣಾ. ಸವಿಯೂಟದಾಸೆಗೆ ಮನವೆಳಸಬೇಡ. ಪರಮೇಶನ ಪಾದವ ನೆನೆದು ಸುಖಿಸಿರಣ್ಣಾ. ತರ್ಕಶಾಸ್ತ್ರ ಆಗಮ ಮಾಯಾಜಾಲದ ಹರಟೆಗೆ ಹೊಗದೆ, ಮೂಲಮಂತ್ರ[ವ] ಮರೆಯದೆ ಸ್ಮರಿಸಿರಣ್ಣಾ. ಸಂಸಾರಿಗಳ ಸಂಗದೊಳಗೆ ಇರಬೇಡ. ಸದ್ಭಾವರ ಸಂಗದೊಳಗಿರ್ದು ನಿತ್ಯವ ಸಾಧಿಸಿಕೊಳ್ಳಿರಣ್ಣಾ. ಪರರ ಯಾಚಿಸಿ ತನುವ ಹೊರೆಯಬೇಡ. ಶಿವನಿಕ್ಕಿದ ಭಿಕ್ಷೆಯೊಳಗಿದ್ದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನೊಲಿಸಿರಣ್ಣಾ.