Index   ವಚನ - 208    Search  
 
ಸರ್ವೇಂದ್ರಿಯಂಗಳಲ್ಲಿ ಸರ್ವಮುಖವಾಗಿ ಬಂದ ಪದಾರ್ಥದ ಪೂರ್ವಾಶ್ರಯವ ಕಳೆದು, ಅವಧಾನದಿಂದ ಕೊಂಬಾತ ನೀನಾದ ಕಾರಣ, ನಾನು ಅರಿದುಕೊಡಬೇಕೆಂಬ ಅವಧಾನವೆನಗಿಲ್ಲಯ್ಯ. ಅದೇನು ಕಾರಣವೆಂದಡೆ: ಎನ್ನಂಗ ಮನ ಪ್ರಾಣ ಇಂದ್ರಿಯಂಗಳು ನಿನ್ನವಾಗಿ. ಅಲ್ಲಿ ಅರಿದು ಭೋಗಿಸುವ ಭೋಗಮೂರ್ತಿ ನೀನೆಯಯ್ಯ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.