Index   ವಚನ - 218    Search  
 
ಅರಳಿದ ಪುಷ್ಪ ಪರಿಮಳಿಸಿದಲ್ಲದೆ ಮಾಣದು. ಗುರುವಿನಿಂದ ಪಡೆದ ಶಿವಲಿಂಗವ ಹರುಷದಿಂದ ನೋಡಿ ನೆನೆದಡೆ, ಆ ಲಿಂಗ, ಕಣ್ಮನವ ವೇಧಿಸಿದಲ್ಲದೆ ಮಾಣದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡುವಡೆ, ನೋಟ ಬೇಟವೆರಡು ಅಳಿದಲ್ಲದಾಗದು.