Index   ವಚನ - 220    Search  
 
ಪದಾರ್ಥವನರ್ಪಿಸಿ ಪ್ರಸಾದವ ಪಡೆದೆವೆಂದೆಂಬರು ನಾವಿದನರಿಯೆವು. ಪದಾರ್ಥವಾವುದು ಪ್ರಸಾದವಾವುದೆಂದರಿಯರು. ಪದಾರ್ಥವೆ ಆತ್ಮನು. ಪ್ರಸಾದವೇ ಪರವಸ್ತುವು. ಪದಾರ್ಥವ ಪರವಸ್ತುವಿನಲ್ಲಿ ಅರ್ಪಿಸಿ, ಪದಾರ್ಥಭಾವವಿಲ್ಲದೆ ಪ್ರಸಾದಭಾವವಾದುದೆ, ಪ್ರಸಾದವ ಪಡೆದುದು ಈ ಭೇದವನರಿಯದೆ, ಪರದ್ರವ್ಯವಾದ ಸಕಲ ಪದಾರ್ಥವನರ್ಪಿಸಿ, ಪ್ರಸಾದವ ಪಡೆದೆವೆಂಬ ಭ್ರಾಂತಬಾಲಕರಿಂದ ಬಿಟ್ಟು ಬಾಲಕರುಂಟೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?