Index   ವಚನ - 252    Search  
 
ತನುವಿಂಗೆ ತನುರೂಪಾಗಿ ತನುವಿಂಗಾಧಾರವಾದೆ. ಮನಕ್ಕೆ ಮನರೂಪಾಗಿ ಮನಕ್ಕೆ ನೆನಹಿನ ಶಕ್ತಿಯನಿತ್ತು ಮನಕ್ಕಾಧಾರವಾದೆ. ಪ್ರಾಣಕ್ಕೆ ಪ್ರಾಣರೂಪಾಗಿ. ಪ್ರಾಣಕ್ಕಾಧಾರವಾದೆ. ಎನ್ನಂಗೆ ಮನ ಪ್ರಾಣದಲ್ಲಿ ನೀವೆ ನಿಂದು, ಸರ್ವಕರಣಂಗಳ ನಿಮ್ಮವ ಮಾಡಿಕೊಂಡ ಕಾರಣ ಎನ್ನ ಪ್ರಾಣ ನಿಮ್ಮಲ್ಲಿ ಆಡಗಿತ್ತು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.