Index   ವಚನ - 258    Search  
 
ಬಿಂದು ನಾದವನೊಂದು ರೂಪು ಮಾಡಿ ಮನವ ಸಂಧಿಸಿ ಬಂಧಿಸಿ ನಿಲಿಸಿ ಇಂದ್ರಿಯಂಗಳನೇಕಮುಖವ ಮಾಡಿ ಚಂದ್ರ ಸೂರ್ಯರನೊಂದು ಮಾರ್ಗದಲ್ಲಿ ನಡೆಸಿ ಚೌದಳಮಧ್ಯದ ಜ್ಞಾನಪೀಠದಲ್ಲಿರ್ದ ಅಮೃತಲಿಂಗವ ಕಂಡು ಕೂಡುವ ಬೆಡಗಿನ ಯೋಗವ ನಿಮ್ಮ ಶರಣರಲ್ಲದೆ ಉಳಿದ ಭವರೋಗಿಗಳೆತ್ತ ಬಲ್ಲರಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?