Index   ವಚನ - 260    Search  
 
ಅರ್ಕನ ಉದಯಕ್ಕೆ ಕತ್ತಲೆ ಹರಿದು, ಚಕ್ಕನೆ ಬೆಳಗಾಯಿತ್ತು. ಬೆಳಗು ಪಸರಿಸಲಾಗಿ ನಿದ್ರೆ ಹರಿದು ಎದ್ದು ಕುಳ್ಳಿರ್ದು ಇದೆತ್ತಣ ಬೆಳಗೆಂದು ಹಿಂಬಾಗಿಲ ತೆಗೆದು ನೋಡಲು ಒಳ ಹೊರಗೆಲ್ಲಾ ತಾನೆ ಬೆಳಗುತ್ತಿರಲು ಆ ಬೆಳಗಿನೊಳಗೆ ನಿಂದು ಬೆಳಗುತ್ತಿದ್ದರಯ್ಯ. ಬೆಳಗನ ಬೆಳಗು ಒಬ್ಬುಳಿಯಾದಂತೆ ಬೆಳಗು ಬೆಳಗು ಹಳಚಿದಂತೆ ಬೆಳಗುತ್ತಿದ್ದರಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣರು.