ನುಡಿಯೊಳಗೆ ಸತ್ಯ, ಹೃದಯದಲ್ಲಿ ಯುಕ್ತಿ,
ಅರುವಿನಲ್ಲಿ ವಿರಕ್ತಿ ದೊರಕೊಂಡರೆ,
ಅಂತವರಲ್ಲಿಯೇ ಭಕ್ತಿ ದೊರಕೊಂಬುದು.
ಆ ಭಕ್ತಿ, ತಾನೆ ಮುಕ್ತಿ ಮಾತೆಯಾದ ಕಾರಣ
ಭಕ್ತಿಯಿಂದ ಶಿವನಲ್ಲಿ ನಿರ್ಮಲ ಚಿತ್ತವನಿರಿಸಿ ನೆನೆವುದು,
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ.
Art
Manuscript
Music
Courtesy:
Transliteration
Nuḍiyoḷage satya, hr̥dayadalli yukti,
aruvinalli virakti dorakoṇḍare,
antavaralliyē bhakti dorakombudu.
Ā bhakti, tāne mukti māteyāda kāraṇa
bhaktiyinda śivanalli nirmala cittavanirisi nenevudu,
nam'ma nijaguru svatantrasid'dhaliṅgēśvarana.