ಕಾಷ್ಠದ ಮೇಲೊಂದು ಕಾಷ್ಠವನಿರಿಸಿ
ಹಿಡಿದು ಮಥನವ ಮಾಡಲು
ಆ ಮಥನದಿಂದುದ್ಭವಿಸಿದಗ್ನಿ ಆ ಕಾಷ್ಠವ ವೇಷ್ಠಿಸಿ,
ತನ್ನ ಸ್ಫುರಣೆಯಿಂದ ಉಷ್ಣಿಸುವಂತೆ
ಶಿವಶರಣರ ಅನುಭಾವಮಥನದಿಂದ ಮಹಾಜ್ಞಾನೋದಯವಾಗಿ
ಕರ್ಪುರದ ಗಿರಿಯನುರಿಕೊಂಡು ನಿರಂಶಕವಾಗಿ
ಉಭಯ ನಿರ್ವಯಲಾದಂತೆ ಲಿಂಗಾಂಗದೈಕ್ಯವಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.