Index   ವಚನ - 324    Search  
 
ನೆಲವಿಲ್ಲದಲ್ಲಿಯ ಉದಕವ ತಂದು, ಗಿಡವಿಲ್ಲದಲ್ಲಿಯ ಪುಷ್ಟವ ತಂದು, ಒಡಲಿಲ್ಲದ ಲಿಂಗಕ್ಕೆ, ಕಡೆಮೊದಲಿಲ್ಲದೆ ಪೂಜೆಯ ಮಾಡುವೆನು, ಎನ್ನ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಂಗೆ.