ಆಯುಧವೈನೂರಿದ್ದರೇನು,
ರಣರಂಗದಲ್ಲಿ ಹಗೆಯ ಗೆಲುವುದು ಒಂದೇ ಅಲಗು.
ಏನನೋದಿ ಏನ ಕೇಳಿದರೇನು,
ತಾನಾರೆಂಬುದನರಿಯದನ್ನಕ್ಕ?
ತಾನಾರೆಂಬುದನರಿದ ಬಳಿಕ ನೀನಾನೆಂಬುದಿಲ್ಲ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ತಾನೆಯಾಗಿಹನು.
Art
Manuscript
Music
Courtesy:
Transliteration
Āyudhavainūriddarēnu,
raṇaraṅgadalli hageya geluvudu ondē alagu.
Ēnanōdi ēna kēḷidarēnu,
tānārembudanariyadannakka?
Tānārembudanarida baḷika nīnānembudilla.
Nijaguru svatantrasid'dhaliṅgēśvaranu tāneyāgihanu.