ಖೇಚರದ ಗಮನವ ಖೇಚರರಲ್ಲದೆ
ಭೂಚರರು ಬಲ್ಲರೆ ಅಯ್ಯ?
ಸವಿವಾಲು ಸಕ್ಕರೆಯ ಸವಿಯ ಸವಿದ ಭೋಗಿಯಲ್ಲದೆ
ರೋಗಿ ಬಲ್ಲನೆ ಅಯ್ಯ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮ ಲಿಂಗಾಂಗದ ಲಿಂಗ ಸಹಗಮನಿಯ ಹೃದಯವ
ಲಿಂಗಾಂಗಿಯಲ್ಲದೆ ಅಂಗಜೀವಿಗಳು ಬಲ್ಲರೆ ಅಯ್ಯಾ?
Art
Manuscript
Music
Courtesy:
Transliteration
Khēcarada gamanava khēcararallade
bhūcararu ballare ayya?
Savivālu sakkareya saviya savida bhōgiyallade
rōgi ballane ayya?
Nijaguru svatantrasid'dhaliṅgēśvarā,
nim'ma liṅgāṅgada liṅga sahagamaniya hr̥dayava
liṅgāṅgiyallade aṅgajīvigaḷu ballare ayyā?