ಶಿವಶರಣನ ಶಿರ ಮೊದಲು ಪಾದ ಕಡೆಯಾದವೆಲ್ಲವು
ಅಮೃತಮಯವಾಗಿಹವು ನೋಡಾ.
ನರಚರ್ಮಾಂಬರವ ಹೊದ್ದಿಹ ಶರಣನ
ಒಳಗು ಹೊರಗೆಂಬವೆಲ್ಲ ಮೋಕ್ಷರೂಪವಾಗಿಹವು ನೋಡಾ.
ಆ ಶರಣನ ಮರ್ತ್ಯರೂಪನೆಂದು ತಿಳಿಯಬಾರದು.
ಆತ ಚಿದ್ರೂಪಾಕಾರ ಪರಮಾತ್ಮನು ತಾನೇ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂದೇ ತಿಳಿವುದು.
Art
Manuscript
Music
Courtesy:
Transliteration
Śivaśaraṇana śira modalu pāda kaḍeyādavellavu
amr̥tamayavāgihavu nōḍā.
Naracarmāmbarava hoddiha śaraṇana
oḷagu horagembavella mōkṣarūpavāgihavu nōḍā.
Ā śaraṇana martyarūpanendu tiḷiyabāradu.
Āta cidrūpākāra paramātmanu tānē,
nijaguru svatantrasid'dhaliṅgēśvaranendē tiḷivudu.