ಆವಾವ ಪರಿಯಲ್ಲಿ ಭಾವಿಸುತ್ತಿಹ ಕರಣದ ವ್ಯಾಕುಲವಡಗಿ
ಮನವು ಏಕಾಂತವಾಗಿ ನಿಂದ ಯೋಗಿ,
ಜ್ಞಾನಸತಿಯ ಸಂಗದಲ್ಲಿರಲು
ಆತಂಗೆ ಸರ್ವಲೋಕವು
ಆ ಲೋಕದ ಭೋಗಂಗಳೆಲ್ಲಾ ತಡೆದಿಹವಾಗಿ
ಆ ಯೋಗಿ ತನಗೆ ಪ್ರಿಯಳಾದ
ಚಿತ್ಕಾಂತೆಯನು, ತನ್ನನು ಕಾಣದೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ತಾನು ತಾನಾಗಿಹನು.
Art
Manuscript
Music
Courtesy:
Transliteration
Āvāva pariyalli bhāvisuttiha karaṇada vyākulavaḍagi
manavu ēkāntavāgi ninda yōgi,
jñānasatiya saṅgadalliralu
ātaṅge sarvalōkavu
ā lōkada bhōgaṅgaḷellā taḍedihavāgi
ā yōgi tanage priyaḷāda
citkānteyanu, tannanu kāṇade,
nijaguru svatantrasid'dhaliṅgēśvaranalli tānu tānāgihanu.