ಹಿಂದು ಮುಂದಣ ಮನದ ಸಂಕಲ್ಪ ವಿಕಲ್ಪವಳಿದು,
ರೂಪಜ್ಞಾನ ನಿರೂಪಜ್ಞಾನವೆಂಬುವೇನೂ ತೋರದೆ,
ಜ್ಞಾನ ಜ್ಞೇಯ ಧ್ಯಾನ ಧ್ಯೇಯ ಲಕ್ಷ್ಯಾಲಕ್ಷ್ಯ ದೃಗ್ ದೃಶ್ಯಗಳೆಂಬ
ವಿಚಾರವಳಿದ ಜೀವನ್ಮುಕ್ತಂಗೆ
ಅರಿಯಲೊಂದಿಲ್ಲ, ಮರೆಯಲೊಂದಿಲ್ಲ,
ತೆರೆಯಡಗಿದ ಅಂಬುನಿಧಿಯಂತೆ ನಿಶ್ಚಿಂತನಾಗಿದ್ದನು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೇ ತಾನಾಗಿ.
Art
Manuscript
Music
Courtesy:
Transliteration
Hindu mundaṇa manada saṅkalpa vikalpavaḷidu,
rūpajñāna nirūpajñānavembuvēnū tōrade,
jñāna jñēya dhyāna dhyēya lakṣyālakṣya dr̥g dr̥śyagaḷemba
vicāravaḷida jīvanmuktaṅge
ariyalondilla, mareyalondilla,
tereyaḍagida ambunidhiyante niścintanāgiddanu.
Nijaguru svatantrasid'dhaliṅgēśvaranē tānāgi.