Index   ವಚನ - 424    Search  
 
ನಾನು ನಾನೆಂಬ ಅಹಂಭಾವವಳಿದು, ಜ್ಞಾನಾನಂದಮಯ ತಾನಾದಬಳಿಕ, ತನ್ನಿಂದನ್ಯವಾದುದೊಂದಿಲ್ಲವಾಗಿ, ಕಾಣಲೊಂದಿಲ್ಲ, ಕೇಳಲೊಂದಿಲ್ಲ, ಅರಿಯಲೊಂದಿಲ್ಲ. ಅನಾದಿ ಅವಿದ್ಯಾಮೂಲ ಮಾಯಾಜಾಲ ಚರಾಚರ ನಾಸ್ತಿಯಾಯಿತ್ತು. ಇನ್ನೇನ ಹೇಳಲುಂಟು ನಿಜಲಿಂಗೈಕ್ಯಂಗೆ? ವಿಷಯಾವಿಷಯಂಗಳೆಂಬ ಉಭಯಭಾವವಡಗಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೇ ತಾನಾಗಿಹನು.