Index   ವಚನ - 425    Search  
 
ತನ್ನೊಳಡಗಿಹ ಅನಂತಕೋಟಿ ಬ್ರಹ್ಮಾಂಡಗಳಿಗೆ ಉತ್ಪತ್ತಿ ಸ್ಥಿತಿ ಲಯಾಶ್ರಯವಾದ ಮಹಾ ಚಿದ್ಭಾಂಡವೇ ತನ್ನಿರವೆಂದರಿದ ಕಾರಣ ಸರ್ವತತ್ವ ಸಾಕ್ಷಿಣಿ ವಿಶ್ವಪ್ರಕಾಶ ಪರಾಶಕ್ತಿರೂಪ ವಿಶ್ವತೋಮುಖ ಚಿದಾತ್ಮಕ ಪರಮಾನಂದಮಯ ತಾನೇ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲವು.