Index   ವಚನ - 429    Search  
 
ಶರಣಮಧ್ಯಲಿಂಗ, ಲಿಂಗ ಮಧ್ಯಶರಣನಾದ ಮತ್ತೆ, ಇನ್ನು ಪರವೆಂದು ಅಪರವೆಂದು ಪ್ರತಿಯಿಡುವ ಜ್ಞಾನವುಂಟೇ ಹೇಳಾ? ಅಹಂಭಾವ ಶೂನ್ಯವಾಗಿ ಭಾವಾಭಾವಲಯವಾದ ಮತ್ತೆ ಇನ್ನು ಭಾವಿಸಲೇನುಂಟುಹೇಳಾ, ಸಮ್ಯಗ್‍ಜ್ಞಾನಿಯಾದ ಮಹಾತ್ಮ ನಿರ್ಲೇಪಕಂಗೆ? ಕಾಯ ಕಾರಣವೆಂಬುವೆಲ್ಲ ಶೂನ್ಯವಾದವು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಲಿಂಗೈಕ್ಯಂಗೆ.