Index   ವಚನ - 432    Search  
 
ಗುರುಮುಖವಿಲ್ಲದೆ ತಾನೆ ಆಯಿತ್ತೆಂಬರು. ಆ ಗುರುವು ಹಿಡಿದಲ್ಲದೆ ಅವುದು ಇಲ್ಲ ನೋಡಾ. ಶಿವನಿಂದಲಾಯಿತ್ತು ಎಂಬ ನುಡಿಯನಾಲಿಸಲಾಗದು, ತಾ ಮಾಡಿದ ದೋಷವನು. ತನ್ನ ಮನವಿಕಾರಕ್ಕೆ ತಾ ಹೋಗಿ ಶಿವನ ಹಳಿವುದಕ್ಕೆ ಸಂಬಂಧವೇನು? ಮಹಾಜ್ಞಾನಿಯಾಗಿ ಪೂರ್ವದಲ್ಲಿ ತಾ ಪಡೆದುದು ತನಗೆ ತಪ್ಪುವದೆ? ಭಾವ ಕರದಲ್ಲಿ ಮನ ಹುಟ್ಟಿದ ಮೇಲೆ ಗುರುವೆಯಾಗಿ ಚರಿಸುವಲ್ಲಿಆತಂಗೆ ಕೊರತೆ ಬರಲು ಆತನ ಅಂತು ಇಂತು ಎಂದು ಜರೆಯಲೇತಕ್ಕೆ? ಸಂಬಂಧವನು ಆರೂ ಮೀರಲಾಗದು ನೋಡಾ ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ.