Index   ವಚನ - 9    Search  
 
ಹೊರಗಣ ಸಿಪ್ಪೆ ಒಳಗೆ ಮೆಲುವನ್ನಕ್ಕ ಉಭಯದ ಕೂಟ. ಅಗಲಿಗೆ ಬಂದ ಮತ್ತೆ ರಸಾನ್ನವಲ್ಲದೆ ಹಿಪ್ಪೆಗೆ ಚಿತ್ತ ಒಪ್ಪಬಲ್ಲುದೆ? ಅರಿವನ್ನಬರ ಸ್ಥಲಕುಳಂಗಳ ಹೊಲಹೊಲದ ಹೊಲಬ ತಿಳಿದಲ್ಲಿ, ಭಕ್ತಿಜ್ಞಾನವೈರಾಗ್ಯಗಳೆಂಬ ತ್ರಿವಿಧದ ಗೊತ್ತು ನಷ್ಟವಾದ ಶರಣ, ತಥ್ಯಮಿಥ್ಯಕ್ಕೆ ಸಿಕ್ಕ ಮತ್ತಾವ ಗುಣಂಗಳಲ್ಲಿಯೂ ಹೊರದೃಷ್ಟಕ್ಕೆ ಬಾರ. ಆತ ನಿಶ್ಚಿಂತ ನೋಡಾ, ನಿಃಕಳಂಕ ಕೂಡಲಚೆನ್ನಸಂಗಮದೇವ ತಾನಾದ ಶರಣ.