ಬಟ್ಟ ಬಯಲಲ್ಲಿ ಒಂದು ಶರಧಿ ಹುಟ್ಟಿತ್ತು.
ಆ ಶರಧಿಯ ನಡುವೆ ಒಂದು ಕಮಲ ಹುಟ್ಟಿತ್ತು.
ಆ ಕಮಲದ ನೆಲೆಯ ಕಾಣಲರಿಯದೆ ತೊಳಲಿ ಬಳಲಿ,
ಜಗದೊಳಗೆ ನಚ್ಚುಮಚ್ಚಿಗೊಳಗಾಗಿ, ಚುಚ್ಚಳ ಪೂಜೆಗೆ ಸಿಲ್ಕಿ,
ಕುಲಕೆ ಛಲಕೆ ಕೊಂದಾಡಿ, ಭವಕ್ಕೆ ಗುರಿಯಾಗುವ
ಮನುಜರ ಕಂಡು ನಾಚಿತ್ತೆನ್ನ ಮನವು.
ಆ ಮನದ ಬೆಂಬಳಿಗೊಂಡು ಹೋದವರೆಲ್ಲ
ಮರುಳಾಗಿಹೋದರು.
ಇದ ನೋಡಿ ನಾನು ಬಟ್ಟಬಯಲಲ್ಲಿ ನಿಂದು ನೋಡಿದಡೆ,
ಶರಧಿ ಬತ್ತಿತ್ತು; ಕಮಲ ಕಾಣಬಂದಿತ್ತು.
ಆ ಕಮಲ ವಿಕಾಸವಾಯಿತ್ತು
ಪರಿಮಳವೆಂಬ ವಾಸನೆ ತೀಡಿತ್ತು.
ಆ ವಾಸನೆವಿಡಿದು ಜಗದಾಸೆಯ ಹಿಂಗಿ
ಮಾತು ಮಥನವ ಕೆಡಿಸಿ,
ಮಹಾಜ್ಯೋತಿಯ ಬೆಳಗಿನಲಿ ಓಲಾಡುವ ಶರಣರ
ಆಸೆ ರೋಷ ಪಾಶಕ್ಕೊಳಗಾದ ಈ ಜಗದ ಹೇಸಿಗಳೆತ್ತಬಲ್ಲರು,
ಈ ಮಹಾಶರಣರ ನೆಲೆಯ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ?
Art
Manuscript
Music
Courtesy:
Transliteration
Baṭṭa bayalalli ondu śaradhi huṭṭittu.
Ā śaradhiya naḍuve ondu kamala huṭṭittu.
Ā kamalada neleya kāṇalariyade toḷali baḷali,
jagadoḷage naccumaccigoḷagāgi, cuccaḷa pūjege silki,
kulake chalake kondāḍi, bhavakke guriyāguva
manujara kaṇḍu nācittenna manavu.
Ā manada bembaḷigoṇḍu hōdavarella
maruḷāgihōdaru.
Ida nōḍi nānu baṭṭabayalalli nindu nōḍidaḍe,
śaradhi battittu; kamala kāṇabandittu.
Ā kamala vikāsavāyittu
parimaḷavemba vāsane tīḍittu.
Ā vāsaneviḍidu jagadāseya hiṅgi
mātu mathanava keḍisi,
mahājyōtiya beḷaginali ōlāḍuva śaraṇara
āse rōṣa pāśakkoḷagāda ī jagada hēsigaḷettaballaru,
ī mahāśaraṇara neleya,
appaṇṇapriya cennabasavaṇṇā?