ಮದ ಮತ್ಸರ ಬಿಡದು, ಮನದ ಕನಲು ನಿಲ್ಲದು,
ಒಡಲಗುಣ ಹಿಂಗದು.
ಇವ ಮೂರನು ಬಿಡದೆ ನಡಸುವನ್ನಕ್ಕ ಘನವ ಕಾಣಬಾರದು.
ಘನವ ಕಾಂಬುದಕ್ಕೆ ಮದ ಮತ್ಸರವನೆ ಬಿಟ್ಟು,
ಮನದ ಕನಲನೆ ನಿಲಿಸಿ, ಒಡಲ ಗುಣ ಹಿಂಗಿ,
ತಾ ಮೃಡರೂಪಾದಲ್ಲದೆ ಘನವ ಕಾಣಬಾರದೆಂದರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
Art
Manuscript
Music
Courtesy:
Transliteration
Mada matsara biḍadu, manada kanalu nilladu,
oḍalaguṇa hiṅgadu.
Iva mūranu biḍade naḍasuvannakka ghanava kāṇabāradu.
Ghanava kāmbudakke mada matsaravane biṭṭu,
manada kanalane nilisi, oḍala guṇa hiṅgi,
tā mr̥ḍarūpādallade ghanava kāṇabāradendaru
nam'ma appaṇṇapriya cennabasavaṇṇa.