ಮನವೆಂದಡೆ ಮರವೆಗೆ ಒಳಗುಮಾಡಿತ್ತು.
ತನುವೆಂದಡೆ ತಾಮಸಕ್ಕೊಳಗುಮಾಡಿತ್ತು.
ಧನವೆಂದಡೆ ಆಶೆಯೆಂಬ ಪಾಶಕ್ಕೊಳಗುಮಾಡಿತ್ತು.
ಇವೀಸು ಮಾಯಾಪಾಶವೆಂದು ಬಿಟ್ಟು ಹುಟ್ಟನರಿದು,
ಬಟ್ಟಬಯಲಲ್ಲಿ ನಿಂದು,
ಚಿತ್ತನಿರ್ಮಲನಾಗಿ ನೋಡಿ ಕಂಡ ಶರಣಂಗೆ
ತನುವೆ ಗುರುವಾಯಿತ್ತು.
ಮನವೆ ಘನವಾಯಿತ್ತು, ಧನವೆ ಜಂಗಮವಾಯಿತ್ತು.
ಈ ತ್ರಿವಿಧವನು ತ್ರಿವಿಧಕಿತ್ತು,
ತಾ ಬಯಲದೇಹಿಯಾದನಯ್ಯಾ ಆ ಮಹಾಶರಣನು.
ಇದರ ನೆಲೆಯನರಿಯದೆ,
ಆ ಮನದ ಬೆಂಬಳಿಗೊಂಡಾಡಿದವರೆಲ್ಲ
ನರಗುರಿಗಳಾದರಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
Art
Manuscript
Music
Courtesy:
Transliteration
Manavendaḍe maravege oḷagumāḍittu.
Tanuvendaḍe tāmasakkoḷagumāḍittu.
Dhanavendaḍe āśeyemba pāśakkoḷagumāḍittu.
Ivīsu māyāpāśavendu biṭṭu huṭṭanaridu,
baṭṭabayalalli nindu,
cittanirmalanāgi nōḍi kaṇḍa śaraṇaṅge
tanuve guruvāyittu.
Manave ghanavāyittu, dhanave jaṅgamavāyittu.
Ī trividhavanu trividhakittu,
tā bayaladēhiyādanayyā ā mahāśaraṇanu.
Idara neleyanariyade,
ā manada bembaḷigoṇḍāḍidavarella
naragurigaḷādarayyā, appaṇṇapriya cennabasavaṇṇa.