ಬ್ರಹ್ಮಾಂಡದಲ್ಲಿ ಹುಟ್ಟಿದವರೆಲ್ಲ
ಭವಬಂಧನಕ್ಕೊಳಗಾದರಯ್ಯಾ.
ನಿಮ್ಮ ನಂಬದ ಸದ್ಭಕ್ತ ಮಹೇಶ್ವರರು
ಭವಬಂಧನವನೆ ಹಿಂಗಿ,
ಮರಣ ಭಯವ ಗೆದ್ದು, ಕರಣಂಗಳ ಸುಟ್ಟು,
ಹರಿಮನವ ನಿಲಿಸಿ, ಅನಲಪವನಗುಣವರತು,
ಜನನಮರಣವಿರಹಿತವಾದ ಶರಣರ
ಭವಭಾರಿಗಳೆತ್ತ ಬಲ್ಲರು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Brahmāṇḍadalli huṭṭidavarella
bhavabandhanakkoḷagādarayyā.
Nim'ma nambada sadbhakta mahēśvararu
bhavabandhanavane hiṅgi,
maraṇa bhayava geddu, karaṇaṅgaḷa suṭṭu,
harimanava nilisi, analapavanaguṇavaratu,
jananamaraṇavirahitavāda śaraṇara
bhavabhārigaḷetta ballaru appaṇṇapriya cennabasavaṇṇā.