Index   ವಚನ - 23    Search  
 
ಕರುಳು ಒಣಗಿತ್ತು ತನು ಕರಗಿತ್ತು;ಮನ ನಿಂದಿತ್ತು, ವಾಯು ಬರತಿತ್ತು, ಅಪ್ಪು ಅರತಿತ್ತು ಹಿಪ್ಪೆ ಉಳಿಯಿತ್ತು. ನೆನಹು ನಿಷ್ಪತ್ತಿಯಾಗಿ ಬೆಳಗನೆ ಬೆರೆದ ಶರಣರ ಜನನಮರಣಕ್ಕೊಳಗಾದ ಮನುಜರೆತ್ತ ಬಲ್ಲರು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ?