ಉಸುರ ಉನ್ಮನಿಗಿತ್ತು, ಶಶಿರವಿಯೊಡಗೂಡಿ,
ಕುಶಲವ ತಿಳಿದು, ಮಿಶ್ರವನರಿದು,
ಎಸಗಿದ ಮಹಾಬೆಳಗಿನೊಳಗೆ ಹೆಜ್ಜೆವಿಡಿದು
ಹೋಗಿ ಅಜನ ಕಂಡೆ.
ಅಜನ ಮಗಳ ಸಂಗವ ಮಾಡಲೊಡನೆ ಅಂಗಗುಣವಳಿಯಿತ್ತು.
ಕಂಗಳ ಜಮಕಿ ಹಿಂಗಿತ್ತು; ಸಂಗಸಂಯೋಗವಾಯಿತ್ತು.
ಮಂಗಳದ ಮಹಾಬೆಳಗಿನೊಳಗೆ ಅಜಗೆ ಅಳಿಯನಾಗಿ,
ಅಜ್ಜಗೆ ಮೊಮ್ಮಗನಾಗಿ,ಒಮ್ಮನವಾಗಿ ಪರಬೊಮ್ಮನೆಯಾಗಿ
ಆಡುವ ಶರಣ ನಮ್ಮ ಅಪ್ಪಣ್ಣಪ್ರಿಯ
ಚೆನ್ನಬಸವಣ್ಣ ತಾನೆ ನೋಡಾ.
Art
Manuscript
Music
Courtesy:
Transliteration
Usura unmanigittu, śaśiraviyoḍagūḍi,
kuśalava tiḷidu, miśravanaridu,
esagida mahābeḷaginoḷage hejjeviḍidu
hōgi ajana kaṇḍe.
Ajana magaḷa saṅgava māḍaloḍane aṅgaguṇavaḷiyittu.
Kaṅgaḷa jamaki hiṅgittu; saṅgasanyōgavāyittu.
Maṅgaḷada mahābeḷaginoḷage ajage aḷiyanāgi,
ajjage mom'maganāgi,om'manavāgi parabom'maneyāgi
āḍuva śaraṇa nam'ma appaṇṇapriya
cennabasavaṇṇa tāne nōḍā.