ಒಡಕು ಮಡಿಕೆಯಂತೆ ಒಡೆದುಹೋಗುವ
ಹಡಿಕೆಕಾಯವ ನೆಚ್ಚಿ,
ತಟತಟನೆ ತಾಗಿ, ಮಠದ ಬೆಕ್ಕಾಗಿ ತಿಟ್ಟನೆ ತಿರುಗಿ,
ಬಟ್ಟೆಯಲಿಕ್ಕಿ ಕಡಿವ ಕಳ್ಳನನರಿಯದೆ,
ತಿಂಬ ಹುಲಿಯನರಿಯದೆ,
ಒಡವೆಯ ಗಳಿಸಿಹೆನೆಂದು ಒಡೆಯನ ಮರೆದು
ತನ್ನ ಮಡದಿ ಮಕ್ಕಳಿಗೆಂದು
ಅವರ ಒಡವೆರೆದು ಹೋಗುವ
ಮಡಿವರೊಡನೆ ನುಡಿಯರು,
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
Art
Manuscript
Music
Courtesy:
Transliteration
Oḍaku maḍikeyante oḍeduhōguva
haḍikekāyava necci,
taṭataṭane tāgi, maṭhada bekkāgi tiṭṭane tirugi,
baṭṭeyalikki kaḍiva kaḷḷananariyade,
timba huliyanariyade,
oḍaveya gaḷisihenendu oḍeyana maredu
tanna maḍadi makkaḷigendu
avara oḍaveredu hōguva
maḍivaroḍane nuḍiyaru,
nam'ma appaṇṇapriya cennabasavaṇṇa.