ಕಂಡಿಹೆ ಕೇಳಿಹೆನೆಂದು ಮುಂದುಗಾಣದೆ
ಸಂದೇಹದಲ್ಲಿ ಮುಳುಗಿ,
ಕಳವಳಿಸಿ ಕಾತರಿಸುವ ಅಣ್ಣಗಳಿರಾ,
ನೀವು ಕೇಳಿರೆ, ಹೇಳಿಹೆನು.
ಕಾಣಬಾರದ ಘನವ ಹೇಳಬಾರದಾಗಿ,
ಹೇಳುವುದಕ್ಕೆ ನುಡಿಯಿಲ್ಲ, ನೋಡುವುದಕ್ಕೆ ರೂಪಿಲ್ಲ.
ಇಂತಪ್ಪ ನಿರೂಪದ ಮಹಾಘನವು
ಶರಣರ ಹೃದಯದಲ್ಲಿ ನೆಲೆಗೊಂಬುದಲ್ಲದೆ,
ಈ ಜನನ ಮರಣಕ್ಕೊಳಗಾಗುವ ಮನುಜರೆತ್ತ ಬಲ್ಲರು
ಆ ಮಹಾಘನದ ನೆಲೆಯ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ?
Art
Manuscript
Music
Courtesy:
Transliteration
Kaṇḍ'̔ihe kēḷihenendu mundugāṇade
sandēhadalli muḷugi,
kaḷavaḷisi kātarisuva aṇṇagaḷirā,
nīvu kēḷire, hēḷihenu.
Kāṇabārada ghanava hēḷabāradāgi,
hēḷuvudakke nuḍiyilla, nōḍuvudakke rūpilla.
Intappa nirūpada mahāghanavu
śaraṇara hr̥dayadalli nelegombudallade,
ī janana maraṇakkoḷagāguva manujaretta ballaru
ā mahāghanada neleya,
appaṇṇapriya cennabasavaṇṇā?