Index   ವಚನ - 56    Search  
 
ನಿಶ್ಚಿಂತ ನಿರಾಳದಲ್ಲಿ ಆಡುವ ಮಹಾದೇವನ ಕರ್ತೃವೆಂದರಿದ ಕಾರಣದಿಂದ, ತತ್ವವೆಂಬುದನರಿದು, ಮನವ ನಿಶ್ಚಿಂತವ ಮಾಡಿ, ನಿಜಸುಖದಲ್ಲಿ ನಿಂದು, ಕತ್ತಲೆಯ ಹರಿಯಿಸಿ, ತಮವ ಹಿಂಗಿಸಿ, ವ್ಯಾಕುಳವನಳಿದು, ನಿರಾಕುಳದಲ್ಲಿ ನಿಂದು, ಬೇಕು ಬೇಡೆಂಬು ಭಯವಳಿದು, ಲೋಕದ ಹಂಗಹರಿದು, ತಾನು ವಿವೇಕಿಯಾಗಿ ನಿಂದು ಮುಂದೆ ನೋಡಿದಡೆ ಜ್ಯೋತಿಯ ಬೆಳಗ ಕಾಣಬಹುದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.