ತನುವೆಂಬ ಹುತ್ತಕ್ಕೆ ಮನವೆಂಬ ಸರ್ಪ ಆವರಿಸಿ,
ಹೆಡೆಯೆತ್ತಿ ಆಡುತ್ತಿರಲು,
ಆ ಸರ್ಪನ ಕಂಡು, ನಾ ಹೆದರಿಕೊಂಡು,
ಗುರು ಕರುಣವೆಂಬ ಪರುಷವ ತಂದು ಮುಟ್ಟಿಸಲು,
ನೋಟ ನಿಂದಿತ್ತು, ಹೆಡೆ ಅಡಗಿತ್ತು, ಹಾವು ಬಯಲಾಯಿತ್ತು.
ಆ ಗುರು ಕರುಣವೆಂಬ ಪರುಷವೆ ನಿಂದಿತ್ತು.
ನಿಂದ ಪರುಷವನೆಕೊಂಡು ನಿಜದಲ್ಲಿ ನಿರ್ವಯಲಾಗುವ
ಶರಣರ ಪಾದವ ನಂಬಿ ಕೆಟ್ಟು ಬಟ್ಟಬಯಲಾದೆನಯ್ಯಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Tanuvemba huttakke manavemba sarpa āvarisi,
heḍeyetti āḍuttiralu,
ā sarpana kaṇḍu, nā hedarikoṇḍu,
guru karuṇavemba paruṣava tandu muṭṭisalu,
nōṭa nindittu, heḍe aḍagittu, hāvu bayalāyittu.
Ā guru karuṇavemba paruṣave nindittu.
Ninda paruṣavanekoṇḍu nijadalli nirvayalāguva
śaraṇara pādava nambi keṭṭu baṭṭabayalādenayyā,
appaṇṇapriya cennabasavaṇṇā.