Index   ವಚನ - 71    Search  
 
ನಾಮ ರೂಪಿಲ್ಲದ ಘನವ ನಾಮ ರೂಪಿಂಗೆ ತಂದಿರಯ್ಯಾ. ಅದೇನು ಕಾರಣವೆಂದಡೆ, ಎನ್ನ ಮನಕ್ಕೆ ಚೆನ್ನಮಲ್ಲೇಶ್ವರನಾದಿರಿ. ಹೀಗೆಂದು ನಿಮ್ಮ ನಾಮಾಂಕಿತ. ಹೀಗಾದಡೆಯು ಕಾಣಲರಿಯರು ಎಂದು ನಡೆನುಡಿ ಚೈತನ್ಯವಿಡಿದು, ಕರದಲ್ಲಿ ಲಿಂಗವ ಹಿಡಿದು, ಚೆನ್ನಮಲ್ಲೇಶ್ವರನೆಂಬ ನಾಮಾಂಕಿತವಿಡಿದು ಬರಲಾಗಿ, ಮರ್ತ್ಯ ಲೋಕದಲ್ಲಿ ತನ್ನ ನೆನೆವ ಶಿವಭಕ್ತರ ಪಾವನ ಮಾಡಬೇಕೆಂದು ಬಂದು, ಭೂಮಿಯ ಮೇಲೆ ಲೀಲೆಯ ನಟಿಸಿ, ತಮ್ಮ ಪಾದದಲ್ಲಿ ನಿಜಮುಕ್ತಳ ಮಾಡಿದರಯ್ಯಾ ಚೆನ್ನಮಲ್ಲೇಶ್ವರನು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.