ತನುವೆಂಬ ಹುತ್ತದಲ್ಲಿ ಮನವೆಂಬ
ಸರ್ಪ ಹೆಡೆಯನುಡುಗಿಕೊಂಡಿರಲು
ಜ್ಞಾನಶಕ್ತಿ ಬಂದು ಎಬ್ಬಿಸಲು,
ಉರಿ ಭುಗಿಲೆನುತ್ತ ಹೆಡೆಯನೆತ್ತಿ ಊರ್ದ್ವಕ್ಕೇರಲು,
ಅಷ್ಟಮದವೆಲ್ಲ ಹಿಟ್ಟುಗುಟ್ಟಿದವು;
ಕರಣಂಗಳೆಲ್ಲ ಉರಿದುಹೋದವು.
ಇದ್ದ ಶಕ್ತಿಯನೆ ಕಂಡು,
ಮನ ನಿಶ್ಚಯವಾದುದನೆ ನೋಡಿ,
ಪಶ್ಚಿಮದ ಕದವ ತೆಗೆದು,
ಬಟ್ಟಬಯಲ ಬೆಳಗಿನೊಳಗೆ ಓಲಾಡಿ
ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Tanuvemba huttadalli manavemba
sarpa heḍeyanuḍugikoṇḍiralu
jñānaśakti bandu ebbisalu,
uri bhugilenutta heḍeyanetti ūrdvakkēralu,
aṣṭamadavella hiṭṭuguṭṭidavu;
karaṇaṅgaḷella uriduhōdavu.
Idda śaktiyane kaṇḍu,
mana niścayavādudane nōḍi,
paścimada kadava tegedu,
baṭṭabayala beḷaginoḷage ōlāḍi
sukhiyādenayyā appaṇṇapriya cennabasavaṇṇā.