Index   ವಚನ - 80    Search  
 
ನಿರಾಳಲಿಂಗವ ಕಾಂಬುದಕ್ಕೆ ಮನ ಮತ್ತೊಂದೆಡೆಗೆ ಹರಿಯದಿರಬೇಕು; ನೆನಹು ಲಿಂಗವಲ್ಲದೆ ಮತ್ತೊಂದ ನೆನೆಯದಿರಬೇಕು; ತನುವಿನಲ್ಲಿ ಮರಹಿಲ್ಲದಿರಬೇಕು; ಕಾಳಿಕೆ ಹೊಗದಿರಬೇಕು. ಇಂತು ನಿಶ್ಚಿಂತವಾಗಿ ಚಿತ್ತಾರದ ಬಾಗಿಲವ ತೆರೆದು ಮುತ್ತು ಮಾಣಿಕ ನವರತ್ನ ತೆತ್ತಿಸಿದಂತಿಹ ಉಪ್ಪರಿಗೆ ಮೇಗಳ ಶಿವಾಲಯವ ಕಂಡು, ಅದರೊಳಗೆ ಮನ ಅಚ್ಚೊತ್ತಿದಂತಿದ್ದು, ಇತ್ತ ಮರೆದು ಅತ್ತಲೆ ನೋಡಿ ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.