ಬಚ್ಚಬರಿಯ ಬೆಳಗ ನೋಡಿಹೆನೆಂದು,
ಮನೆಯಾತನ ಮಂಕು ಮಾಡಿದೆ,
ಭಾವನ ಬಯಲ ಮಾಡಿದೆ;
ಕಂದನ ಕಣ್ಮುಚ್ಚಿದೆ; ನಿಂದೆ ಕುಂದುಗಳ ಮರೆದೆ;
ಜಗದ ಹಂಗ ಹರಿದೆ.
ಜಂಗಮದ ಪಾದೋದಕ ಪ್ರಸಾದವಕೊಂಡ ಕಾರಣದಿಂದ
ಮಂಗಳದ ಮಹಾಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ..
Art
Manuscript
Music
Courtesy:
Transliteration
Baccabariya beḷaga nōḍ'̔ihenendu,
maneyātana maṅku māḍide,
bhāvana bayala māḍide;
kandana kaṇmuccide; ninde kundugaḷa marede;
jagada haṅga haride.
Jaṅgamada pādōdaka prasādavakoṇḍa kāraṇadinda
maṅgaḷada mahābeḷaginoḷagōlāḍi sukhiyādenayyā
appaṇṇapriya cennabasavaṇṇā..