ಅದೇನು ಕಾರಣವೆಂದಡೆ,
ಘನಕ್ಕೆ ಘನವಾದರು; ಮನಕ್ಕೆ ಮನವಾದರು;
ತನುವಿಂಗೆ ತನುವಾದರೂ; ನಡೆ ನುಡಿಗೆ ಚೈತನ್ಯವಾದರು;
ನೋಡುವುದಕ್ಕೆ ನೋಟವಾದರು;
ಕೂಡುವುದಕ್ಕೆ ಲಿಂಗವಾದರು.
ಈ ಒಳಹೊರಗೆ ಬೆಳಗುವ ಬೆಳಗು ನೀವೆಯಾದ ಕಾರಣ,
ನಿಮ್ಮ ಪಾದದಲ್ಲಿ ನಾ ನಿಜಮುಕ್ತಳಾದೆನಯ್ಯಾ
ಚೆನ್ನಮಲ್ಲೇಶ್ವರ,ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Adēnu kāraṇavendaḍe,
ghanakke ghanavādaru; manakke manavādaru;
tanuviṅge tanuvādarū; naḍe nuḍige caitan'yavādaru;
nōḍuvudakke nōṭavādaru;
kūḍuvudakke liṅgavādaru.
Ī oḷahorage beḷaguva beḷagu nīveyāda kāraṇa,
nim'ma pādadalli nā nijamuktaḷādenayyā
cennamallēśvara,appaṇṇapriya cennabasavaṇṇā.