ನಿಮ್ಮ ಪಾದವಿಡಿದು ಮನ ಪಾವನವಾಯಿತ್ತು;
ಎನ್ನ ತನು ಶುದ್ಧವಾಯಿತ್ತು;
ಕಾಯ ಗುಣವಳಿಯಿತ್ತು;
ಕರಣಗುಣ ಸುಟ್ಟು, ಭಾವವಳಿದು, ಬಯಕೆ ಸವೆದು,
ಮಹಾದೇವನಾದ ಶರಣರ ಪಾದವಿಡಿದು
ನಿಜಮುಕ್ತಳಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Nim'ma pādaviḍidu mana pāvanavāyittu;
enna tanu śud'dhavāyittu;
kāya guṇavaḷiyittu;
karaṇaguṇa suṭṭu, bhāvavaḷidu, bayake savedu,
mahādēvanāda śaraṇara pādaviḍidu
nijamuktaḷādenayyā
appaṇṇapriya cennabasavaṇṇā.