ಸಾಸಿರದಳ ಕಮಲವೆಂದಡೆ ಸೂಸಿಕೊಂಡಿರುವ ಮನ.
ಪವನವೆಂದಡೆ ಎಲ್ಲೆಡೆಯಲ್ಲಿ ಸೂಸಿ ಆಡುವಂತಹದು.
ಬಿಂದುವೆಂದಡೆ ಆಗುಮಾಡುವಂತಹದು.
ಈ ಮನ ಪವನ ಬಿಂದು ಮೂರನು ಒಡಗೂಡಿ ನೋಡಲು,
ಪರಂಜ್ಯೋತಿ ಪ್ರಕಾಶದಂತಹ ಬೆಳಗೆ
ಎನ್ನ ಕಂಗಳ ಮುಂದೆ ನಿಂದಿತ್ತು.
ಆ ಮಹಾಬೆಳಗನೆ ಕಂಗಳಲ್ಲಿ ಹೆರೆಹಿಂಗದೆ ನೋಡಿದಡೆ,
ಎನ್ನಂಗದ ಒಳಹೊರಗೆ ಪರಿಪೂರ್ಣವಾಗಿದ್ದಿತ್ತು ಕಾಣಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ,
ನಿಮ್ಮ ಪಾದಕರುಣದಿಂದ.
Art
Manuscript
Music
Courtesy:
Transliteration
Sāsiradaḷa kamalavendaḍe sūsikoṇḍiruva mana.
Pavanavendaḍe elleḍeyalli sūsi āḍuvantahadu.
Binduvendaḍe āgumāḍuvantahadu.
Ī mana pavana bindu mūranu oḍagūḍi nōḍalu,
paran̄jyōti prakāśadantaha beḷage
enna kaṅgaḷa munde nindittu.
Ā mahābeḷagane kaṅgaḷalli herehiṅgade nōḍidaḍe,
ennaṅgada oḷahorage paripūrṇavāgiddittu kāṇā
appaṇṇapriya cennabasavaṇṇā,
nim'ma pādakaruṇadinda.