ಅಂತರಂಗ ಬಹಿರಂಗ ಶುದ್ದವಿಲ್ಲದೆ ನುಡಿವರು
ಸಂತೆಯ ಸೂಳೆಯರಂತೆ.
ಅಂತರಂಗ ಬಹಿರಂಗವೆಂಬುದಿಲ್ಲ ನಮ್ಮ ಶಿವಶರಣರಿಗೆ.
ಅಂತರಂಗವೆಲ್ಲ ಅರುಹಾಯಿತ್ತು:
ಬಹಿರಂಗದಲ್ಲಿ ಲಿಂಗವಾಯಿತ್ತು,
ಆ ಲಿಂಗದಲ್ಲೆ ನುಡಿದು, ಲಿಂಗದಲ್ಲೆ ನಡೆದು,
ಲಿಂಗದಲ್ಲೆ ಮುಟ್ಟಿ, ಲಿಂಗದಲ್ಲೆ ವಾಸಿಸಿ,
ಲಿಂಗದಲ್ಲೆ ಕೇಳಿ, ಲಿಂಗವಾಗಿ ನೋಡಿ,
ಸರ್ವಾಂಗವು ಲಿಂಗವಾಗಿ,
ಆ ಲಿಂಗವ ನೋಡುವ ಕಂಗಳಲ್ಲೆ ಐಕ್ಯ.
ಕಂಡಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Antaraṅga bahiraṅga śuddavillade nuḍivaru
santeya sūḷeyarante.
Antaraṅga bahiraṅgavembudilla nam'ma śivaśaraṇarige.
Antaraṅgavella aruhāyittu:
Bahiraṅgadalli liṅgavāyittu,
ā liṅgadalle nuḍidu, liṅgadalle naḍedu,
liṅgadalle muṭṭi, liṅgadalle vāsisi,
liṅgadalle kēḷi, liṅgavāgi nōḍi,
sarvāṅgavu liṅgavāgi,
ā liṅgava nōḍuva kaṅgaḷalle aikya.
Kaṇḍayā, appaṇṇapriya cennabasavaṇṇā.