Index   ವಚನ - 1    Search  
 
ಆವ ಕಾಯಕವ ಮಾಡಿದಡೂ ಒಂದೇ ಕಾಯಕವಯ್ಯಾ. ಆವ ವ್ರತವಾದಡೂ ಒಂದೇ ವ್ರತವಯ್ಯಾ. ಆಯ ತಪ್ಪಿದಡೆ ಸಾವಿಲ್ಲ; ವ್ರತತಪ್ಪಿದಡೆ ಕೂಡಲಿಲ್ಲ. ಕಾಕಪಿಕದಂತೆ ಕೂಡಲು ನಾಯಕನರಕ ಗಂಗೇಶ್ವರಲಿಂಗದಲ್ಲಿ.

C-395 

  Sat 18 Nov 2023  

 ಹಾದರ ಕಾಯಕವನ್ನು ಶರಣರು ತಿರಸ್ಕರಿಸಿದವರು. ತಾಡೋಲೆಗಳ ಪ್ರತಿ ಲಿಪಿ ಮಾಡುವವರ ಅಜ್ಞಾನದಿಂದ ಆದರ ಕಾಯಕ ಹಾದರ ಕಾಯಕವಾಗಿ ವ್ಯತ್ಯಾಸವಾಗಿದೆ. ಆದರ ಕಾಯಕ ಎಂದರೆ ಮಹಾಮನೆಗೆ ಬಂದವರನ್ನು ಸತ್ಕರಿಸಿ ಉಪಚರಿಸುವುದು. ಈಗಿನ ಭಾಷೆಯಲ್ಲಿ ಹೇಳುವುದಾದರೆ ಸ್ವಾಗತಕಾರ (Receptionist) ಎಂದು ತಿಳಿಯಬಹುದು. ಶರಣರ ಸಂಪರ್ಕ ದೊರೆತ ಮೇಲೆ ಹಾದರ ಕಾಯಕ ಮಾಡಲು ಸಾಧ್ಯವಿಲ್ಲ.
  Chandrashekhar RU
????????