Index   ವಚನ - 2    Search  
 
ಎಲ್ಲಾ ಅಂತರಂಗ ತೃಪ್ತಿಯಾದಲ್ಲಿ, ಮತ್ತತನವಿಪ್ಪುದು ಜಾಗ್ರದಲ್ಲಿ, ದೃಷ್ಠಾತದ ಸ್ವಪ್ನದಲ್ಲಿ. ಛಾಯೆ ಮಾಯೆ ಸುಷುಪ್ತಿಯಲ್ಲಿ, ಬಿಂಬ ಛಾಯೆ ವಾಗ್ವಿಲಾಸಂಗಳಲ್ಲಿ, ಕೇಳಿ ಭಾವಜ್ಞಾನದಿಂದರಿದು, ಮಹಾಜ್ಞಾನದಿಂದ ಕಂಡು, ದಿವ್ಯಜ್ಞಾನದಿಂದ ಪರಿಪೂರ್ಣವಾಗಿ, ನೋಟ ಕೂಟವಿಲ್ಲದೆ, ಕೂಟಕ್ಕೆ ಅಂಗವಿಲ್ಲದೆ, ಅಂಗಕ್ಕೆ ಆತ್ಮನಿಲ್ಲದೆ, ಆತ್ಮಂಗೆ ಭಾವವಿಲ್ಲದೆ, ಭಾವಕ್ಕೆ ಭಾವವಿಲ್ಲದೆ ನಿಂದುದು, ಚಿದ್ಭಾವವಿರಹಿತ ವಸ್ತುವದು, ಧರ್ಮೇಶ್ವರಲಿಂಗದ ಗೊತ್ತು.