Index   ವಚನ - 8    Search  
 
ಕಾಲಸಂಹರ ಕಾಮವಿದೂರ ಕರಣಾತೀತ ಕರ್ಮಗಿರಿಗೊಜ್ರ ಕಮಲಮಿತ್ರ ಶಶಿಭೂಷ ಕರುಣಕಟಾಕ್ಷ ಕಮಲೋದ್ಭವಶಿರಕರಕಪಾಲ ಕಮಲಪೂಜಿತನಯನ ಪಾದಚರಣದಲಿ ಧರಿಸಿದ ದೇವ ವಿಷ್ವಕ್ಸೇನ ಹೆಣನ ಹೊತ್ತ ದೇವ ವೇದಶಾಸ್ತ್ರಕತೀತದೇವನೆಂದು ಮೊರೆಹೊಕ್ಕೆ. ಎನ್ನಯ ಮೊರೆಯಂ ಕೇಳಿ ಕಾದರೆ ಕಾಯಿ, ಕೊಂದರೆ ಕೊಲ್ಲು, ನಿಮ್ಮ ಧರ್ಮ, ನಿಮ್ಮ ಧರ್ಮ. ನೀನೆ ಹುಟ್ಟಿಸಿ, ನೀನೆ ಕರ್ಮಕಾಯಕೆ ಗುರಿಮಾಡಿ, ನೀನಗಲಿದರೆ ನೊಂದೆ ಬೆಂದೆ. ಬಿಡಬೀಸದಿರು, ಎನ್ನನಿತ್ತ 'ಬಾ'ಯೆಂದು ತಲೆದಡಹೊ ಜಯಜಯ ಹರಹರ ಶಿವಶಿವ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.