Index   ವಚನ - 12    Search  
 
ಪಿಂಡಾಂಡ ಕಿರಿದಲ್ಲ, ಬ್ರಹ್ಮಾಂಡ ಹಿರಿದಲ್ಲ, ಕಾಣಿರಣ್ಣಾ! `ಪಿಂಡ ಬ್ರಹ್ಮಾಂಡ ದ್ವಯೋರೈಕ್ಯ'ಯೆಂದುದಾಗಿ. ಇದು ಕಾರಣ, ಪಿಂಡ ಬ್ರಹ್ಮಾಂಡವಾಯಿತ್ತು. ಆ ಪಂಚಭೂತವೆ ಶರೀರವಾಯಿತ್ತು. ಅದು ಹೇಗೆಂದಡೆ: `ಪಂಚಭೂತಮಯಂ ದೇಹಂ' ಎಂದುದಾಗಿ, ಬ್ರಹ್ಮಾಂಡದಲ್ಲುಳ್ಳ ಜನನ ಪಿಂಡಾಂಡದಲ್ಲುಂಟು; ಪಿಂಡಾಂಡದಲ್ಲುಳ್ಳ ಜನನ ಬ್ರಹ್ಮಾಂಡದಲ್ಲುಂಟು. ಬ್ರಹ್ಮಾಂಡದ ಲಯ ಬ್ರಹ್ಮಾಂಡಕ್ಕೆ. ಪಿಂಡಾಂಡದ ಲಯ ಬ್ರಹ್ಮಾಂಡಕ್ಕೆ ಇಂತೀ ಎರಡರ ಭೇದವ ನೀನೆ ಬಲ್ಲೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.