Index   ವಚನ - 52    Search  
 
ಪಶುವಿನ ಮುಂದೆ ಮುರವಂ ಹಾಕಿ ಅಮೃತವ ಕರಕೊಂಬಂತೆ, ಹೊನ್ನು ಹೆಣ್ಣು ಮಣ್ಣು ಮೂರೆಂಬ ಮಾಯಾಪಾಶದ ಹಸರು ಹುಲ್ಲಂ ಎನ್ನ ಮುಂದೆ ಚೆಲ್ಲಿ, ಆಸೆಗೆಳೆಸಿ, ಶಿವಜ್ಞಾನಾಮೃತವನೊಯಿದು ಅಜ್ಞಾನಕೆನ್ನ ಗುರಿ ಮಾಡಿ ಎನ್ನ ಕಾಡುತಿದ್ದೆಯಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.