ಆರೆ ನೀನಾರೆ ಮಾಯದ ಬಲೆಯ
ತೋರೆನ್ನ ಸಿಗಿಸಿ ನೀನಗಲಿದರೆ.
ತ್ರಿವಿಧ ಗುಣವು ತ್ರಿವಿಧ ಮಲವು
ತ್ರಿವಿಧ ತನುವು ತ್ರಿವಿಧ ಮನವು
ತ್ರಿವಿಧ ಕರಣ ತ್ರಿವಿಧ ಅಗ್ನಿಗೆನ್ನನಿಕ್ಕಿ
ಭಾವಿಸಿ ಕಾಡುತಿದೆ ನಿನ್ನ ಮಾಯ. | 1 |
ಪಂಚವಿಂಶವು ಪಂಚಭೂತಗಳುಪವಿ
ಪಂಚಕರ್ಮೇಂದ್ರಿಯಂಗಳ ಬಲೆಯು
ಸಂಚನಿಕ್ಕಿ ಹರಿಹಂಚ ಮಾಡಿ ಮಾಯಾ ಪ್ರ
ಪಂಚನ ಕಾಡುತಿದೆ ಗುರುವೆ. | 2 |
ಹೊನ್ನಾಗಿ ಚರಿಸಿ ಹೆಣ್ಣಾಗಿ ಸುಳಿದು
ಮಣ್ಣಾಗಿ ನಿಂದು ಮಾಯಾರಕ್ಕಸಿಯು
ಕಣ್ಣಿಂದ ನೋಡಿ ಕಾಲ್ನೆಡಿಸಿ ಅಜಹರಿಸುರರ
ಬಣ್ಣಗುಂದಿಸಿ ಕಾಡುತಿದೆ ಗುರುವೆ. | 3 |
ಪಶುವಿನ ಮುಂದೆ ಗ್ರಾಸವ ಚೆಲ್ಲಲದು
ಹಸುರೆಂದು ಆಸೆಗೈವಂತೆ ಮಾಯಾ
ರಸ ವಿಷಯ ಅಲ್ಪಸುಖಕೆನ್ನ ಗುರಿಮಾಡಿ
ವಿಷಕಂಠ ನೀನಗಲಿದೆ ಗುರುವೆ. | 4 |
ಪರುಷಕೆ ಪಾಷಾಣವನೊತ್ತೆಯಿಡುವಂತೆ
ಶರೀರಮಾಯೆಗೆ ಎನ್ನ ಗುರಿ ಮಾಡಿ
ಹರ ನೀನಗಲದಿರು
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. | 5 |
Art
Manuscript
Music
Courtesy:
Transliteration
Āre nīnāre māyada baleya
tōrenna sigisi nīnagalidare.
Trividha guṇavu trividha malavu
trividha tanuvu trividha manavu
trividha karaṇa trividha agnigennanikki
bhāvisi kāḍutide ninna māya. | 1 |
Pan̄cavinśavu pan̄cabhūtagaḷupavi
pan̄cakarmēndriyaṅgaḷa baleyu
san̄canikki harihan̄ca māḍi māyā pra
pan̄cana kāḍutide guruve. | 2 |
Honnāgi carisi heṇṇāgi suḷidu
maṇṇāgi nindu māyārakkasiyu
kaṇṇinda nōḍi kālneḍisi ajaharisurara
baṇṇagundisi kāḍutide guruve. | 3 |
Paśuvina munde grāsava cellaladu
hasurendu āsegaivante māyā
rasa viṣaya alpasukhakenna gurimāḍi
viṣakaṇṭha nīnagalide guruve. | 4 |Paruṣake pāṣāṇavanotteyiḍuvante
śarīramāyege enna guri māḍi
hara nīnagaladiru
paramaguru paḍuviḍi sid'dhamallināthaprabhuve. | 5 |