ವಾಯುಮುಖದಲುಲಿವಾವಯದ ವೃಕ್ಷದೊಳು
ಆಯತವಾಗಿಹ ಹಣ್ಣಿನ ರುಚಿಯನು
ಸವಿಯನರಿಯದೆ ಯತಿ ಸಿದ್ಧ ಸಾಧ್ಯರು
ಬಾಯಸವಿಯನುಂಬರು.
ಸರಸಿಜನೆಂಬ ಭೂಮಿಗೆ ವಿಷ್ಣುವೆಂಬ ನೀರಾಗಿ
ನೆರದು ರುದ್ರಾಗ್ನಿಯೆಂದೆಂಬುವ ಮೂಲದ
ಪರಬ್ರಹ್ಮವೃಕ್ಷದ ತುಟ್ಟತುದಿಯಲ್ಲಿಹ
ವರ ಅಮೂರ್ತ ಹಣ್ಣಿನ ಸವಿಗೆರಗೊಡದಲ್ಲಾಡಿ. | 1 |
ಐದು ಹತ್ತನು ಕೂಡಿದ ಸ್ವಸ್ಥಾನದಲ್ಲಿ ನಿಂದು ಈ
ರೈದು ಗುಣವ ಕೊಟ್ಟು ಒರಲಿ ಚೇತರಿಸುತಿರಲಿ
ಮೈಗುಂದಿ ಮೂಲೋಕ ಅಸುರಪಡೆಗೆ ಸಿಲ್ಕಿ
ಸಾಯಸಬಡುತಿದೆ ಸಂಸಾರಬಂಧನದೊಳು. | 2 |
ವಾಯು ಸರ್ಪನ ನುಂಗಿ ಮೇಲೆ ಗಗನವನಡರಿ
ಛಾಯದ ಮನೆಯೊಳು ನಿಂದು ಚತುಃಕರಣ
ಮಾಯಮದದಹಂಕಾರಗಿರಿಯನೇರಿ
ಆಯಸಗೊಳುತಿದೆ ಬರಿದೆ ಅಜ್ಞಾನದೊಳು. | 3 |
ವಾಯುಮುಖದ ತನು ವಾಯುಮುಖದ ಮನವು
ವಾಯುಮುಖದ ಕರಣ ವಾಯುಮುಖದ ಚಿತ್ತ
ವಾಯುಮುಖದ ಬುದ್ಧಿ ವಾಯುಮುಖದ ಆತ್ಮ
ವಾಯುವಿಂಗೆ ಗುರಿಯಾಯಿತ್ತು . | 4 |
ಗುಡಿಯಮುಖದಿ ದೇವರ ಕಾಣ್ಬಂದದಿಂ
ಒಡಲ ವಾಯುಮುಖದಿ ಲಿಂಗವ ಕಂಡು
ಕೂಡಿಯೆ ಒಡವೆರದು ಗುರುಸಿದ್ಧಮಲ್ಲಿನಾಥನ ಪಾದ
ದೆಡೆಯ ನಂಬಿಯೆ ನಿತ್ಯನಾದೆನೆಲೆ ದೇವ. | 5 |
Art
Manuscript
Music
Courtesy:
Transliteration
Vāyumukhadalulivāvayada vr̥kṣadoḷu
āyatavāgiha haṇṇina ruciyanu
saviyanariyade yati sid'dha sādhyaru
bāyasaviyanumbaru.
Sarasijanemba bhūmige viṣṇuvemba nīrāgi
neradu rudrāgniyendembuva mūlada
parabrahmavr̥kṣada tuṭṭatudiyalliha
vara amūrta haṇṇina savigeragoḍadallāḍi. | 1 |
Aidu hattanu kūḍida svasthānadalli nindu ī
raidu guṇava koṭṭu orali cētarisutirali
maigundi mūlōka asurapaḍege silki
sāyasabaḍutide sansārabandhanadoḷu. | 2 |
Vāyu sarpana nuṅgi mēle gaganavanaḍari
chāyada maneyoḷu nindu catuḥkaraṇa
māyamadadahaṅkāragiriyanēri
āyasagoḷutide baride ajñānadoḷu. | 3 |
Vāyumukhada tanu vāyumukhada manavu
vāyumukhada karaṇa vāyumukhada citta
vāyumukhada bud'dhi vāyumukhada ātma
vāyuviṅge guriyāyittu. | 4 |Guḍiyamukhadi dēvara kāṇbandadiṁ
oḍala vāyumukhadi liṅgava kaṇḍu
kūḍiye oḍaveradu gurusid'dhamallināthana pāda
deḍeya nambiye nityanādenele dēva. | 5 |