Index   ವಚನ - 85    Search  
 
ವೇದಶಾಸ್ತ್ರ ಪುರಾಣಾಗಮಂಗಳನೋದುತ್ತಿದ್ದೇವೆಂಬುತಿಪ್ಪರು, ವೇದಶಾಸ್ತ್ರ ಪುರಾಣಾಗಮ ಆವೆಂದರಿಯರು. ವೇದಶಾಸ್ತ್ರಪುರಾಣಾಗಮವನೋದಿ, ಹೊರಹೊರಗಡೆ ಹೊತ್ತುಗಳೆದು, ಒಳಗಿಪ್ಪ ಅಷ್ಟಮದವ ನಿರಸನವ ಮಾಡಲರಿಯದೆ ಕಷ್ಟಬಡುತಿಪ್ಪುದೆನ್ನಯ ಮನವು. ಲೋಕ ಆಡಿಯಾಡಿ ಕೆಟ್ಟು ಕೆಲಸಾರಿ ಹೋಗುತಿದೆ, ಸೃಷ್ಟಿ ಪ್ರತಿಪಾಲಕ ನಿಮ್ಮ ಜ್ಞಾನವ ಮರದು, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.